ads

April 04, 2022

 


Song-1 : Idho Nodi Mantralaya Album : Rajkumar Ellanodi Mantralaya Singer : S. P. Balasubrahmanyam Music : M. Ranga Rao Lyricist : R. N. Jayagopal


ಪೂಜ್ಯಾಯ ರಾಘವೇಂದ್ರಾಯ

ಸತ್ಯಧರ್ಮರತಾಯಚ
ಭಜತಾಂ ಕಲ್ಪವೃಕ್ಷಾಯ

ನಮತಾಂ ಕಾಮಧೇನವೇ

 

ಇದೇ ನೋಡಿ ಮಂತ್ರಾಲಯ
ರಾಯರು ನೆಲೆಸಿಹ ಪುಣ್ಯ ನಿಲಯ
ಇದೇ ನೋಡಿ ಮಂತ್ರಾಲಯ
ರಾಯರು ನೆಲೆಸಿಹ ಪುಣ್ಯ ನಿಲಯ
ಇದೇ ಅವರ ಬೃಂದಾವನ
ಭಕ್ತರ ಹೃದಯ ಸಿಂಹಾಸನ
ಇದೇ ನೋಡಿ ಮಂತ್ರಾಲಯ

♫♫♫♫♫♫♫♫♫♫♫♫


ಪೂಜಾ ಸಮಯ ಆಯಿತು ಬನ್ನಿ
ತುಂಗೆಯಲಿ ಮಿಂದು ಬೇಗ ಬನ್ನಿ
ಪೂಜಾ ಸಮಯ ಆಯಿತು ಬನ್ನಿ
ತುಂಗೆಯಲಿ ಮಿಂದು ಬೇಗ ಬನ್ನಿ
ಫಲ ಪುಷ್ಪಗಳ ಪೂಜಿಸೆ ತನ್ನಿ
ಫಲ ಪುಷ್ಪಗಳ ಪೂಜಿಸೆ ತನ್ನಿ
ರಾಘವೇಂದ್ರ ನಿನ್ನ ನಮಿಸುವೆ ಎನ್ನಿ
ಇದೇ ನೋಡಿ ಮಂತ್ರಾಲಯ
ರಾಯರು ನೆಲೆಸಿಹ ಪುಣ್ಯ ನಿಲಯ
ಇದೇ ಅವರ ಬೃಂದಾವನ
ಭಕ್ತರ ಹೃದಯ ಸಿಂಹಾಸನ
ಇದೇ ನೋಡಿ ಮಂತ್ರಾಲಯ
♫♫♫♫♫♫♫♫♫♫♫♫
ಆ ಆ ಆ ಆ ಆ ಆ ಆ ಆ ಆ ಆ
ಧಮ್ ಧಮ್ ಧಮ್ ಧಮ್

ಎನ್ನಲು ನಗಾರಿ
ತಂ ತಂ ತಂ ತಂ ಊದಲು ಶಂಖ
ಧಮ್ ಧಮ್ ಧಮ್ ಧಮ್

ಎನ್ನಲು ನಗಾರಿ
ತಂ ತಂ ತಂ ತಂ ಊದಲು ಶಂಖ
ಮೂಲ ರಾಮನ ಸನ್ನಿಧಿ ಪ್ರಕಾಶ
ಮೂಲ ರಾಮನ ಸನ್ನಿಧಿ ಪ್ರಕಾಶ
ಮಂಗಳಾರತಿ ಜೊತೆ ಮಂತ್ರ ಘೋಷ

ಇದೇ ನೋಡಿ ಮಂತ್ರಾಲಯ
ರಾಯರು ನೆಲೆಸಿಹ ಪುಣ್ಯ ನಿಲಯ
ಇದೇ ಅವರ ಬೃಂದಾವನ
ಭಕ್ತರ ಹೃದಯ ಸಿಂಹಾಸನ
ಇದೇ ನೋಡಿ ಮಂತ್ರಾಲಯ
♫♫♫♫♫♫♫♫♫♫♫♫
ವರುಷಗಳು ಏಳು ನೂರರ ಕಾಲ
ನಿರತವು ರಾಯರ ಕರುಣೆಯ ಲೀಲಾ
ವರುಷಗಳು ಏಳು ನೂರರ ಕಾಲ
ನಿರತವು ರಾಯರ ಕರುಣೆಯ ಲೀಲಾ
ಪ್ರಹ್ಲಾದ ರಾಯರ ತಫ ಫಲವೆಲ್ಲ
ಪ್ರಹ್ಲಾದ ರಾಯರ ತಫ ಫಲವೆಲ್ಲ
ಹಂಚುವರಂತೆ ಭಕ್ತರಿಗೆಲ್ಲಾ
ಇದೇ ನೋಡಿ ಮಂತ್ರಾಲಯ
ರಾಯರು ನೆಲೆಸಿಹ ಪುಣ್ಯ ನಿಲಯ
ಇದೇ ಅವರ ಬೃಂದಾವನ
ಭಕ್ತರ ಹೃದಯ ಸಿಂಹಾಸನ
ಇದೇ ನೋಡಿ ಮಂತ್ರಾಲಯ
ಮಂತ್ರಾಲಯ
ಮಂತ್ರಾಲಯ


Idhe Nodi Manthralaya Song Lyrics

Idho Nodi Manthraalaya Song Lyrics

0 Comments:

Post a Comment