ads

December 02, 2021

 


ಚಿತ್ರ: ಗೆಜ್ಜೆನಾದ
ಸಂಗೀತ: ವಿ ಮನೋಹರ್
ಸಾಹಿತ್ಯ: ಹಂಸಲೇಖ
ಮೂಲ ಗಾಯಕರು: ಕೆ ಎಸ್ ಚಿತ್ರ

ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ತಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ … ಇದೆ ತರ
ಇದ್ದರೆಷ್ಟು … ಚೆನ್ನ ಚೆನ್ನ
ಏಳಿ ಏಳಿ ಎಲ್ಲ ಈ ಭೂಮಿಗಾಯ್ತು ಮೆಲ್ಲ
ಆ ದಿವಾಕರನ ಉದಯ…
ದಿವಾಕರನ ಉದಯ

ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ತಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ … ಇದೆ ತರ
ಇದ್ದರೆಷ್ಟು … ಚೆನ್ನ ಚೆನ್ನ
ಏಳಿ ಏಳಿ ಎಲ್ಲ ಈ ಭೂಮಿಗಾಯ್ತು ಮೆಲ್ಲ
ಆ ದಿವಾಕರನ ಉದಯ…
ದಿವಾಕರನ ಉದಯ

♫♫♫♫♫♫♫♫♫♫♫♫

ಬಾನಮ್ಮನೊಡಲ ಕಂದಮ್ಮಗಳು
ಈ ಕೆಂಪಾದ ಮುಗಿಲುಗಳು
ಆ ಕಂದಗಳನು ತೂಗೋಕೆ ಬರುವ
ತಂಗಾಳಿ ಲಹರಿಗಳು
ವನದೇವತೆಯ ಶಾಲೆ ಹಾ ಹಾ
ಮಣಿ ಮಾಣಿಕದ ಮಾಲೆ ಹೋ ಹೊ
ಈ ಎಲೆ ಎಲೆ ಹಿಮಗಳ ತಂಗುದಾಣ
ಮುಂದೆಲ್ಲಿಗೆ ಪಯಣ

ಮಳ್ಳಿ ಮಳ್ಳಿ ಮಿಂಚುಳ್ಳಿ...
ಜಾಣ ಜಾಣ ತಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ … ಇದೆ ತರ
ಇದ್ದರೆಷ್ಟು … ಚೆನ್ನ ಚೆನ್ನ
ಏಳಿ ಏಳಿ ಎಲ್ಲ ಈ ಭೂಮಿಗಾಯ್ತು ಮೆಲ್ಲ
ಆ ದಿವಾಕರನ ಉದಯ…
ದಿವಾಕರನ ಉದಯ

♫♫♫♫♫♫♫♫♫♫♫♫

ಲಾ ಲಾ ಲ ಲಾ ಲಾ ಲ
ಲಾ ಲಾ ಲ ಲಾ ಲಾ ಲ
ಮುಂಜಾನೆ ಗಗನ ಎಲ್ಲೆಲ್ಲೂ ಕವನ
ಸಾಲೆಲ್ಲ ಪಕ್ಷಿಗಳು
ಒಂದೊಂದು ಥರದ ನೂರೊಂದು ಸ್ವರದ
ಸ್ವಚ್ಛಂದ ಗಮಕಗಳು
ನವಿರಾದ ನುಡಿ ವಚನ ಹಾ ಹಾ
ಈ ಪುಟಾಣಿಗಳ ಪಠಣ ಹೋ ಹೊ
ಈ ಬದುಕಿಗೆ ಪ್ರತಿದಿನ ಸೂರ್ಯನೊದಯ
ಆದಾಗ ಹರುಷಮಯ

ಮಳ್ಳಿ ಮಳ್ಳಿ ಮಿಂಚುಳ್ಳಿ...
ಜಾಣ ಜಾಣ ತಾಜಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡೀ … ಇದೆ ತರ
ಇದ್ದರೆಷ್ಟು … ಚೆನ್ನ ಚೆನ್ನ
ಏಳಿ ಏಳಿ ಎಲ್ಲ ಈ ಭೂಮಿಗಾಯ್ತು ಮೆಲ್ಲ
ಆ ದಿವಾಕರನ ಉದಯ…
ದಿವಾಕರನ ಉದಯ

ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ತಾಜಣ
ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ತಾ ಜಾಣ

-----------------------------------------------------------

Gejjenaada Movie Songs Lyrics

  • Malli Malli Minchulli Lyrics
  • Somaara Santhege Song Lyrics
  • Megha O Megha Lyrics
  • Kuhoo Kuhoo Lyrics
  • Sindhu Sindhura Mallige Lyrics
  • Sundara Naada Lyrics
-----------------------------------------------------------

Malli Malli Minchulli Song Karaoke


Like My FaceBook Page : PK Music Lyrics


If you want any Kannada Sing along Karaoke : PK Music Karaoke World


If you find any mistakes in this Page of  Lyrics free feel to correct it and Mention in the Comment Box.

0 Comments:

Post a Comment